Call Us Now: +91 87620 54756

ಸಿಒಡಿಪಿನಲ್ಲಿ ಲಿಂಗತ್ವ ಸಮಾನತೆ ಪ್ರೇರಕ ತಂಡಕ್ಕೆ ತರಬೇತಿ

11/10/2024

ಮಿಸೋರಿಯರ್ ಜರ್ಮನಿ, ಕ್ರಾಸ್ ಸಮಾಜ ಸೇವಾ ಸಂಸ್ಥೆ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ, ಸಿಒಡಿಪಿ (ರಿ) ಮಂಗಳೂರು ಸಮಾಜ ಸೇವಾ ಸಂಸ್ಥೆಯ ನೇತೃತ್ವದಲ್ಲಿ ಸಂಪದ ಸಂಸ್ಥೆ ಉಡುಪಿ, ಕಿಟ್ಸ್ ಸಂಸ್ಥೆ ಪುತ್ತೂರು, ಡಿ.ಕೆ.ಆರ್.ಡಿ.ಎಸ್ ಸಂಸ್ಥೆ ಬೆಳ್ತಂಗಡಿ ೪ ಸಮಾಜ ಸೇವಾ ಸಂಸ್ಥೆಯ ಲಿಂಗ ಸಮಾನತಾ ಪ್ರೇರಕ ತಂಡದ ಸದಸ್ಯರುಗಳಿಗೆ ೨ ದಿನದ ಲಿಂಗತ್ವ ಪ್ರೇರಣಾ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಉದ್ಘಾಟಕರಾಗಿ ರಾಜ್ಯ ಮಟ್ಟದ ಒಕ್ಕೂಟ ಪ್ರತಿನಿಧಿ ಶ್ರೀಮತಿ ಸೀಮಾ ಮಥಾಯಸ್‌ರವರು ದೀಪವನ್ನು ಬೆಳಗಿಸಿ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಿಒಡಿಪಿ (ರಿ) ಮಂಗಳೂರು ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ| ವಿನ್ಸೆಂಟ್ ಡಿ ಸೋಜರವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಶ್ರೀಮತಿ ಮಮತಾರವರು ಸ್ವಾಗತಿಸಿ, ಶ್ರೀಯುತ ಆ್ಯಂಟನಿಯವರು ಧನ್ಯವಾದ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಯುತ ಹರಿಶ್ಚಂದ್ರ ಹಳಾಕಾರ್ ಕಾರವಾರ ಕೆ.ಡಿ.ಡಿ.ಸಿ ಸಂಸ್ಥೆಯ ಸಂಯೋಜಕರು ಹಾಗೂ ಶ್ರೀಯುತ ಸ್ಟಾನ್ಲಿ ಫೆರ್ನಾಂಡಿಸ್ ಉಡುಪಿ ಸಂಪದ ಸಂಯೋಜಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಿಒಡಿಪಿ ಸಂಸ್ಥೆಯ ಸಂಯೋಜಕಿಯಾದ ಶ್ರೀಮತಿ ಲೀಡಿಯಾ ಮೊರಸ್‌ರವರು ನಿರೂಪಿಸಿದರು.