Call Us Now: +91 87620 54756

ಹೆಣ್ಣು ಮಕ್ಕಳ, ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರ ಮತ್ತು ದೌರ್ಜನ್ಯ ಖಂಡಿಸಿ ಸಿ ಓ ಡಿ ಪಿ (ರಿ) ಮಂಗಳೂರು ಪ್ರವರ್ತಿತ ಜೀವನ್ ರಕ್ಷಾ ಮಹಿಳಾ ಜಿಲ್ಲಾ ಒಕ್ಕೂಟದಿಂದ ಜಿಲ್ಲಾಧಿಕಾರಿ, ಪೋಲಿಸ್ ಕಮಿಷನರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ

11/10/2024

ಮಂಗಳೂರು: ಜೀವನ್ ರಕ್ಷಾ ಮಹಿಳಾ ಜಿಲ್ಲಾ ಒಕ್ಕೂಟ ಇದರ ನೇತೃತ್ವದಲ್ಲಿ ಇತ್ತೀಚೆಗೆ ರಾಜ್ಯ ಮತ್ತು ಜಿಲ್ಲೆಯ ಹಲವಾರು ಕಡೆಗಳಲ್ಲಿ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಮೇಲೆ ಆಗುತ್ತಿರುವ ಕೊಲೆ, ಅತ್ಯಾಚಾರ ಮತ್ತು ದೌರ್ಜನ್ಯ ಖಂಡಿಸಿ ತಪ್ಪಿದಸ್ಥರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥರಿಗೆ ಶಾಶ್ವತವಾಗಿ ಜಾಮೀನು ನಿರಾಕರಿಸಬೇಕು ಹಾಗೂ ವಿಧವಾ ವೇತನ ಹೆಚ್ಚಳ ಕುರಿತಂತೆ ಸೆ.13ರಂದು ಜಿಲ್ಲಾಧಿಕಾರಿಯವರಿಗೆ, ಪೋಲಿಸ್ ಕಮಿಷನರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.