ಸಿ ಓ ಡಿ ಪಿ (ರಿ) ಮಂಗಳೂರು ಪ್ರವರ್ತಿತ ಕಾಮಧೇನು ಮತ್ತು ಕಲ್ಪವೃಕ್ಷ ಮಹಾಸಂಗಗಳ ಅಡಿಯಲ್ಲಿರುವ 40 ಸಂಘಗಳ ಸರ್ವಧರ್ಮೀಯರು ಸೇರಿದ ಸೌಹಾರ್ದ ಸಂಭ್ರಮದ ಆಟಿ ಡೊಂಜಿ ಕೂಟ ಕಾರ್ಯಕ್ರಮ ಸಿ ಓ ಡಿ ಪಿ ಯ ಮದರ್ ತೆರೇಸಾ ಸಭಾಂಗಣದಲ್ಲಿ ದಿನಾಂಕ 6 ಆಗಸ್ಟ್ 2023 ಭಾನುವಾರದಂದು ಜರಗಿತು.
ಕುಮಾರಿ ಸ್ನೇಹರವರು ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಅತಿಥಿಗಳನ್ನು ಬೆಲ್ಲ ಮತ್ತು ನೀರು ನೀಡುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ತುಳುನಾಡ ಸಂಸ್ಕೃತಿಯ ಪ್ರತೀಕವಾದ ಆಟಿಕಳಂಜರವರ ಆಗಮನದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಮಾಡುವ ಉದ್ದೇಶದಿಂದ ವೈದ್ಯ ದಂಪತಿಗಳಾದ ಇತಿಯಾಸ್/ಮೇಘನಾ ಇವರು ಕೇಶದಾನ ಮಾಡಿದರು, ಅವರಿಗೆ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಮಹಾ ಸಂಘದ ಸದಸ್ಯರು ಬಡವರಿಗಾಗಿ ಸಣ್ಣ ತಿಂಗಳ ಉಳಿತಾಯವನ್ನು ಬ್ಯಾಂಕಿಗೆ ಜಮಾ ಮಾಡುತ್ತಿದ್ದರು.
ಆ ಉಳಿತಾಯದಿಂದ ಸಂಘದ ಎರಡು ಬಡ ಕುಟುಂಬದವರಿಗೆ ಚಿಕಿತ್ಸೆಗಾಗಿ ಚಿಕ್ಕನ್ನು ವಿತರಿಸಲಾಯಿತು. ನಂತರ ಸ್ಥಳೀಯ ಕಾರ್ಪೊರೇಟರ್ ಆದ ಶಕೀಲಾ ಖಾವರವರು ಸೊಳ್ಳೆ ಪರದೆಗಳನ್ನು ವಿತರಿಸಿ ಮಾತನಾಡಿ ಆಟಿಡೊಂಜಿ ಕೂಟ ಒಂದು ಸೌಹಾರ್ದದ ಸಂಕೇತ ಎಲ್ಲಾ ಜಾತಿಯವರು ಸೇರಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವಂತಹ ಕಾರ್ಯಕ್ರಮವು ಮುಂದುವರೆಸಿಕೊಂಡು ಹೋಗುವುದು ಆಗತ್ಯವಿದೆಯೆಂದು ತಿಳಿಸಿದರು. ನಂತರ ಸಿ ಓ ಡಿ ಪಿಯ ನಿರ್ದೇಶಕರಾದ ವಂದನೀಯ ಸ್ವಾಮಿ ವಿನ್ಸೆಂಟ್ ಡಿಸೋಜರವರು ಮಾತನಾಡಿ, ಪ್ರಕೃತಿಯನ್ನು ನಾವು ಪ್ರೀತಿಸಬೇಕು ಆಟಿಡೊಂಜಿ ಕೂಟ ಒಂದು ದಿನಕ್ಕೆ ಸೀಮಿತವಲ್ಲ ನಾವು ನಮ್ಮ ಪ್ರಕೃತಿಯನ್ನು ರಕ್ಷಿಸಬೇಕು ಈ ರೀತಿ ಸೌಹಾರ್ದದಿಂದ ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ಸೌಹಾರ್ದತೆ ಯು ಹೆಚ್ಚುತ್ತದೆ ಎಂದು ಹೇಳಿದರು. ಕೆನರಾ ಕಮ್ಯುನಿಕೇಶನ್ ಸೆಂಟರ್ ಇದರ ನಿರ್ದೇಶಕರಾದ ಅನಿಲ್ ಫೆರ್ನಾಂಡಿಸ್ ರವರು ಉಪಸಿತರಾಗಿದ್ದರು. ಸ್ವಾಭಾವಿಕ ಸಂಪನ್ಮೂಲ ಸಂರಕ್ಷಣೆ ಇದರ ಸಂಯೋಜಕರಾದ ರೀಟಾರವರು ಸಾವಯವ ತರಕಾರಿ ಮತ್ತು ಇದರ ಪ್ರಯೋಜನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕರ್ತೆ ಶೀಮತಿ ಕಲಾರವರು ಕಾರ್ಯಕ್ರಮವನ್ನು ಆಯೋಜಿಸಿದರು. ಶ್ರೀಮತಿ ಸತ್ಯಾವತಿ ಕಾಮದೇನು ಮಹಾ ಸಂಘದ ಅಧ್ಯಕ್ಷರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀಮತಿ ಜಯಲಕ್ಷ್ಮಿ ಇವರು ಧನ್ಯವಾದಗಳು ಹೇಳಿದರು.
ನಂತರ ಸಂಘದವರೇ ಮನೆಯಲ್ಲಿ ಮಾಡಿ ತಂದ ತುಳುನಾಡ ವಿವಿಧ ಖಾದ್ಯಗಳ ಭೋಜನವನ್ನು ಎಲ್ಲರೂ ಸವಿದರು ಈ ಕಾರ್ಯಕ್ರಮಕ್ಕೆ 200 ಮಂದಿ ಹಾಜರಿದ್ದರು