Call Us Now: +91 87620 54756

ಸಿ.ಒ.ಡಿ.ಪಿ.(ರಿ) ಮಂಗಳೂರು: ಸ್ವಸಹಾಯ ಸಂಘದ ಮಹಿಳೆಯರಿಗೆ ಒಕ್ಕೂಟ ಬಲವರ್ಧನೆ ತರಬೇತಿಯು ಜರಗಿತು.

07/03/2026

ದಿನಾಂಕ 08/01/2026 ರಂದು ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿ ಮಿಸೋರಿಯರ್ (Misereor) ಮತ್ತು ಬೆಂಗಳೂರು ಕ್ರಾಸ್ (CROSS) ಸಂಸ್ಥೆಯ ಸಹಯೋಗದೊಂದಿಗೆ ಸಿಒಡಿಪಿ (CODP) ಸಂಸ್ಥೆಯಲ್ಲಿ ಒಕ್ಕೂಟ ಬಲವರ್ಧನೆ ತರಬೇತಿ ನಡೆಯಿತು.

ಸಭಾ ಅಧ್ಯಕ್ಷತೆಯನ್ನು ಸಮೃದ್ಧಿ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ರವರು ವಹಿಸಿದರು. ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್‌ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಶಿವಮೊಗ್ಗ SMSS ಸಂಸ್ಥೆಯ ಮಹಿಳಾ ಸಬಲೀಕರಣ ಯೋಜನಾ ಸಂಯೋಜಕರಾದ ಶ್ರೀಮಾನ್ ಜಗದೀಶ್‌ರವರು ಉಪಸ್ಥಿತರಿದ್ದರು. ಸಭೆಯಲ್ಲಿ ಜೀವನ್ ರಕ್ಷಾ ಮಹಿಳಾ ತಾಲೂಕು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸೀಮಾರವರು ಹಾಗೂ ಮಹಿಳಾ ಸಬಲೀಕರಣ ಯೋಜನಾ ಸಂಯೋಜಕರಾದ ಕು. ಸುಪ್ರಿಯಾ ರವರು ಉಪಸ್ಥಿತರಿದ್ದರು.

ತರಬೇತಿಯಲ್ಲಿ ಸಿಒಡಿಪಿ ಸಂಸ್ಥೆಯ ಅಧೀನದಲ್ಲಿರುವ ಒಕ್ಕೂಟ, ಮಹಾಸಂಘಗಳ ಪ್ರತಿನಿಧಿಗಳು ಹಾಗೂ ಮಹಿಳಾ ಸಬಲೀಕರಣ ಯೋಜನೆಯ ಸಿಬ್ಬಂದಿಗಳು ಭಾಗವಹಿಸಿದರು. ಕಾರ್ಯಕ್ರಮಕ್ಕೆ ಸರ್ವರನ್ನು ಕು. ಸುಪ್ರಿಯಾ ಸ್ವಾಗತಿಸಿ, ಶ್ರೀಮತಿ ಜಯಶ್ರೀ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಜಸಿಂತಾ ನೆರವೇರಿಸಿದರು.